Sunday, 31 July 2016

ಯಕ್ಷ ವಾಚಸ್ಪತಿ, ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿಧಿವಶ

ಲೇಖಕರು : ಉದಯವಾಣಿ
ಶುಕ್ರವಾರ, ಜುಲೈ 1 , 2016
ಜುಲೈ 1 , 2016

ಯಕ್ಷ ವಾಚಸ್ಪತಿ, ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿಧಿವಶ

ಮಂಗಳೂರು : ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದ, ಹೆಸರಾಂತ ಅರ್ಥಧಾರಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ (71ವರ್ಷ) ಅವರು ಅನಾರೋಗ್ಯದಿಂದ ಇಂದು (ಶುಕ್ರವಾರ) ಬೆಳಿಗ್ಗೆ 9. 15 ಕ್ಕೆ ನಿಧನ ಹೊಂದಿದರು.

ಯಕ್ಷವಾಚಸ್ಪತಿ ಎಂಬ ಬಿರುದಾಂಕಿತರಾದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಕನ್ನಡ ಮತ್ತು ತುಳುವಿನ ಶ್ರೇಷ್ಠ ಪ್ರಸಂಗಕರ್ತರಾಗಿಯೂ ಹೆಸರುವಾಸಿಯಾಗಿದ್ದರು. ವಿಶ್ವನಾಥ ಶೆಟ್ಟಿ ಅವರು ಕೆಲದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟುವಿನಲ್ಲಿ ಕೊರಗ ಶೆಟ್ಟಿ ಮತ್ತು ರೇವತಿಯವರ ಪುತ್ರನಾಗಿ 1945ರಲ್ಲಿ ಜನಿಸಿದ ಇವರು ಪದವಿ ಪೂರ್ವ ಶಿಕ್ಷಣ ಪಡೆದಿದ್ದರು.

ಕನ್ನಡದಲ್ಲಿ ಶ್ರೀ ರಾಮ ಸೇತು, ವರ್ಣವೈಷಮ್ಯ, ವಿಷಮ ಸಮರಂಗ, ಕನ್ಯಾಂತರಂಗ, ಜ್ವಾಲಾ ಜಾಹ್ನವಿ, ಶಶಿವಂಶವಲ್ಲರಿ, ಚಾಣಕ್ಯತಂತ್ರ ಮುಂತಾದ ಪ್ರಸಂಗವನ್ನು ರಚಿಸಿದ್ದರೆ, ತುಳುವಿನಲ್ಲಿ ಬೆಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆ ಪ್ರಸಂಗ ಬರೆದಿದ್ದಾರೆ. ವಿಶ್ವನಾಥ ಶೆಟ್ಟಿಯವರೇ ರಚಿಸಿ ನಿರ್ದೇಶಿಸಿದ್ದ ಶ್ರೀ ಕೃಷ್ಣ ಪರಂಧಾಮದ ಕೃಷ್ಣನ ಪಾತ್ರ ಅವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿತ್ತು.

ಕಟೀಲು ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಬಳಿಕ ಕದ್ರಿ, ಕರ್ನಾಟಕ, ಮಂಗಳಾದೇವಿ ಸಾಲಿಗ್ರಾಮ, ಸದ್ಯ ಹಿರಿಯಡ್ಕ ಮೇಳದಲ್ಲಿ ತಿರುಗಾಟ ಮಾಡುತಿದ್ದರು. ದಾಮೋದರ ಮಂಡೆಚ್ಚರು, ಬಲಿಪರು, ಅರುವ ಕೊರಗಪ್ಪ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಡಿಯಾಗಿದ್ದರು.

ಪ್ರಸಿದ್ಧ ಪ್ರಸ೦ಗಕರ್ತ, ತಾಳಮದ್ದಳೆಯ ಬೇಡಿಕೆಯ ವಾಗ್ಮಿಯಾಗಿ, ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ, ಸಾಲಿಗ್ರಾಮ, ಹಿರಿಯಡ್ಕ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.

No comments:

Post a Comment